ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಸಮಗ್ರ ಮಕ್ಕಳ ರಕ್ಷಣಾ ಯೋಜನೆ 2235-02-102-0-36 (ಯೋಜನೆ):

     ಕೇಂದ್ರ ಸರ್ಕಾರವು ಹಾಲಿ ಇರುವ ವಿವಿಧ ಯೋಜನೆಗಳಾದ ಬಾಲನ್ಯಾಯ ಕಾಯ್ದೆಯ ಅನುಷ್ಠಾನ, ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆದ ತಂಗುದಾಣಗಳು, ದತ್ತು ಕಾರ್ಯಕ್ರಮ  ಮತ್ತು ಮಕ್ಕಳ ಸಹಾಯವಾಣಿ ಸೇವೆಗಳ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿ ನೂತನವಾದ ಕೇಂದ್ರ ಪುರಸ್ಕ್ರತ  ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು 2009-10 ರಿಂದ ಜಾರಿಗೆ ತಂದಿದ್ದು, ಕರ್ನಾಟಕ ರಾಜ್ಯದಲ್ಲೂ ಸಹ ಜಾರಿಗೆ ತರಲಾಗಿದೆ. ದಿನಾಂಕ:22.03.2010 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸದರಿ ಐಸಿಪಿಎಸ್ ಯೋಜನೆಯ ಅನುಷ್ಟಾನದ ಬಗ್ಗೆ MOU  ಸಹಿಯಾಗಿರುತ್ತದೆ. ಕರ್ನಾಟಕ ಸಂಘ ನೋಂದಣಿ ಕಾಯ್ದೆ 1960ರ ಅನ್ವಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯನ್ನು ದಿನಾಂಕ:05.02.2011 ರಂದು ನೋಂದಣಿ ಮಾಡಲಾಗಿದೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ  ಈ ಕೆಳಗಿನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

  • ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಗಳು
  • ದತ್ತು ಕಾರ್ಯಕ್ರಮ
  • ಮಕ್ಕಳ ಸಹಾಯವಾಣಿ
  • ಪ್ರಾಯೋಜಕತ್ವ ಕಾರ್ಯಕ್ರಮ

ಸೊಸೈಟಿಯು ಈ ಕೆಳಕಂಡ ಸಾಮಾಜಿಕ ಕಾಯ್ದೆಗಳನ್ವಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

  1. ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2015 ನಿಯಮಗಳು 2016
  2. ಹಿಂದೂ ದತ್ತಕ ಮತ್ತು ನಿರ್ವಹಣೆ ಕಾಯ್ದೆ 1956
  3. ಪೋಷಕತ್ವ ಮತ್ತು ವಾರ್ಡ್ಸ್ ಕಾಯ್ದೆ, 1860
  4. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 ಹಾಗೂ ನಿಯಮಗಳು 2012.

ಮಾರ್ಗದರ್ಶಕ ತತ್ವಗಳು:

  • ಮಕ್ಕಳ ಸಂರಕ್ಷಣೆ – ಇದೊಂದು ಕುಟುಂಬದ ಪ್ರಾಥಮಿಕ ಜವಾಬ್ದಾರಿಯಾಗಿದ್ದು, ಇದರಲ್ಲಿ ಸಮುದಾಯ, ಸರ್ಕಾರ ಮತ್ತು ನಾಗರೀಕ ಸಮಾಜದ ಸಹಯೋಗವಿರುತ್ತದೆ.
  • ಪ್ರೀತಿ ಪೂರ್ವಕ ಮತ್ತು ಪೋಷಣೆ ನೆಲೆಗಟ್ಟಿನ ಕುಟುಂಬ – ಮಗುವಿಗೆ ಇದೊಂದು ಉತ್ತಮವಾದ ಸ್ಥಳ
  • ಖಾಸಗಿತನ ಮತ್ತು ಗೌಪ್ಯತೆ.
  • ಕಳಂಖ ರಹಿತ ಮತ್ತು ತಾರತಮ್ಯ ರಹಿತ.
  • ದೌರ್ಬಲ್ಯಗಳ ಕಡಿತ ಮತ್ತು ತಡೆಗಟ್ಟುವಿಕೆ – ಮಕ್ಕಳ ಸಂರಕ್ಷಣಾ ಕೇಂದ್ರಿತ ಫಲಿತಾಂಶ.
  • ಮಕ್ಕಳ ಸಾಂಸ್ಥೀಕರಣ – ಅಂತಿಮ ಆಧ್ಯತೆ/ಆಯ್ಕೆ
  • ಮಗು ಕೇಂದ್ರಿತ ಯೋಜನೆ ಮತ್ತು ಅನುಷ್ಟಾನ.
  • ಅತ್ಯುತ್ತಮವಾದ ತಾಂತ್ರಿಕತೆ – ನೀತಿ ಸಂಹಿತೆ
  • ಕಾರ್ಯಕ್ರಮಗಳನ್ನು ಹೊಂದಿಸಿಕೊಳ್ಳುವಲ್ಲಿ ವ್ಯಕ್ತಿಗತವಾದ ಸ್ಥಳೀಯ ಻ಗತ್ಯತೆಗಳಿಗೆ ಸ್ಪಂದಿಸುವುದು.
  • ಉತ್ತಮ ಆಡಳಿತ, ಉತ್ತರದಾಯಿತ್ವತೆ ಮತ್ತು ಜವಾಬ್ದಾರಿ.

ಆದ್ಯತಾ ಗುಂಪು:

        ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಪಾಲನೆ ಮತ್ತು ರಕ್ಷಣೆಯ ಸಗತ್ಯವಿರುವ ಮಕ್ಕಳಿಗೆ, ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ ಮಕ್ಕಳಿಗೆ ಮತ್ತು ಕಾನೂನಿನ ಸಂಪರ್ಕಕ್ಕೆ ಬರುವ ಮಕ್ಕಳು ಅಂದರೆ ಆಪಾದಿತ ಅಥವಾ ಸಾಕ್ಷಿದಾರ ಅಥವಾ ಇತರೆ ಯಾವುದೇ ರೀತಿಯ ಸಂಕಷ್ಟ ಪರಿಸ್ಥಿತಿಯುಳ್ಳ ಮಕ್ಕಳಿಗೆ ತನ್ನ ಉದ್ದೇಶಿತ ಕಾರ್ಯ ಚಟುವಟಿಕೆಗಳಲ್ಲಿ ಗಮನ ನೀಡುತ್ತದೆ.

        ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ದುರ್ಬಲ ಮಕ್ಕಳಿಗೆ ಶಾಸನಬದ್ಧ, ನಿಯಂತ್ರಣಾತ್ಮಕ ಮತ್ತು ಪೋಷಣೆ ಮತ್ತು ಪುನರ್ವಸತಿ ಸೇವೆಗಳನ್ನು ನೀಡುವುದಲ್ಲದೇ ಸಂಭಾವ್ಯ ದುರ್ಬಲ ಕುಟುಂಬದ, ಅಪಾಯದಲ್ಲಿರುವ ಕುಟುಂಬದ ಮತ್ತು ಸಾಮಾಜಿಕವಾಗಿ ಹೊರತುಪಡಿಸಿದ ಗುಂಪಿನ ಮಕ್ಕಳು ಅಂದರೆ ವಲಸೆ ಕುಟುಂಬಗಳು, ಬಡತನ ರೇಖೆಗಿಂತ ಕಡಿಮೆ ಜೀವನ ಮಟ್ಟದ ಕುಟುಂಬ, ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗಗಳು, ತಾರತಮ್ಯಕ್ಕೆ ಒಳಗಾದ ಕುಟುಂಬಗಳು, ಹೆಚ್.ಐ.ವಿ/ಏಡ್ಸ್ ಪೀಡಿತ ಮತ್ತು ಭಾದಿತ ಮಕ್ಕಳು, ಬೀದಿಬದಿಯ ಮಕ್ಕಳು, ಮಾದಕ ದ್ರವ್ಯ ಪೀಡಿತ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಅನೈತಿಕ ಸಾಗಾಣಿಕೆ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು, ಅನಾಥ ಮಕ್ಕಳು, ಬಂಧಿಖಾನೆಯಲ್ಲಿರುವ ಪೋಷಕರ ಮಕ್ಕಳಿಗೆ ಪುನರ್ವಸತಿ ಸೇವೆಗಳನ್ನು ಒದಗಿಸುತ್ತದೆ.

ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾಲುದಾರಿಕೆ:

            ಸಂಕಷ್ಟ ಪರಿಸ್ಥಿತಿಯಲ್ಲಿರುವ ಎಲ್ಲಾ ಮಕ್ಕಳನ್ನು ನಿರ್ಧಿಷ್ಟವಾಗಿ ತಲುಪುವ ಸಲುವಾಗಿ ಸರ್ಕಾರ ಮತ್ತು ನಾಗರೀಕ ಸಮಾಜದ ಭಾಗವಹಿಸುವಿಕೆ ಅಡಿಯಲ್ಲಿ ಮಕ್ಕಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಜವಾಬ್ದಾರಿಯಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ಯನ್ನು ಅನುಷ್ಠಾನಗೊಳಿಸಲಾಗುತ್ತದೆ.

 

ಸೇವೆಗಳನ್ನು ಅನುಷ್ಠಾನಗೊಳಿಸುವ ವಿನ್ಯಾಸಗಳು:

1.ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿ

ದಿನಾಂಕ:05.02.2011ರಂದು ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿಯು ನೋಂದಣಿಯಾಗಿದ್ದು, ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ ಮತ್ತು 30 ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ.

ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿ ಕಾರ್ಯಕ್ರಮಗಳು ಕೆಳಕಂಡಂತಿವೆ.

  1. ಮಕ್ಕಳ ರಕ್ಷಣೆಗಾಗಿ ಇರುವ ಎಲ್ಲಾ ಕಾಯ್ದೆ ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಮಕ್ಕಳ ರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆಯಲ್ಲಿ ನಿಗಧಿಪಡಿಸಿರುವ ಗುರಿಯನ್ನು ಸಾಧಿಸಲು, ರಾಷ್ಟ್ರ ಮತ್ತು ರಾಜ್ಯದ ಆದ್ಯತೆಗಳು, ನಿಯಮ ಹಾಗೂ ಮಾರ್ಗಸೂಚಿಗಳನ್ನು ಸೊಸೈಟಿಯು ಅನುಸರಿಸುತ್ತದೆ.
  2. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಬರುವ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆ, ಉಸ್ತುವಾರಿ ಹಾಗೂ ಸರ್ಕಾರದ ವತಿಯಿಂದ ನಡೆಯುತ್ತಿರುವ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೇಲ್ವಿಚಾರಣೆ.
  3. ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ಅಗತ್ಯವಿರುವ ಆರ್ಥಿಕ ಸೌಲಭ್ಯವನ್ನು ಒದಗಿಸುವುದು ಹಾಗೂ ಹಣದ ಉಪಯುಕ್ತತೆಯ ಬಗ್ಗೆ ಪರಿಶೀಲಿಸುವ ಕಾರ್ಯವನ್ನು ನಿರ್ವಹಿಸುವುದು.
  4. ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಮತ್ತು ನೆಟ್ ವರ್ಕಿಂಗ್ ಕಾರ್ಯವನ್ನು ಕೈಗೊಳ್ಳುವುದು.
  5. ಸಂಕಷ್ಟದಲ್ಲಿರುವ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ದತ್ತಾಂಶವನ್ನು ದಾಖಲೀಕರಣ ಮಾಡಿ ದಿಕ್ಸೂಚಿಯನ್ನು ಅನುಸರಿಸಿ ಮೇಲ್ವಿಚಾರಣೆ ಮಾಡುವುದು.
  6. ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿವಿಧ ಹಂತದ ಸಿಬ್ಬಂದಿ ಹಾಗೂ ಅಧಿಕಾರಿಗಳ (ಸರಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ) ಸಾಮರ್ಥ್ಯವನ್ನು ಬಲಪಡಿಸುವ ಸಲುವಾಗಿ ತರಬೇತಿಗಳನ್ನು ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ (ಸಾರಾ):

            ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆಯು ಸ್ವದೇಶಿ ದತ್ತು ಪ್ರೋತ್ಸಾಹಿಸಲು ಮತ್ತು ವಿದೇಶಿ ದತ್ತು ಕಾರ್ಯಕ್ರಮವನ್ನು ಕ್ರಮಬದ್ಧಗೊಳಿಸಲು ಹಾಗೂ ಇತರೆ ಅಸಾಂಸ್ಥಿಕ ಕಾರ್ಯಕ್ರಮಗಳಾದ ಪ್ರಾಯೋಜಕತ್ವ, ಪೋಷಕತ್ವ ಮತ್ತು ಅನುಪಾಲನಾ ಕಾರ್ಯಕ್ರಮಗಳ ಅನುಷ್ಟಾನವನ್ನು ಸಮನ್ವಯ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

ರಾಜ್ಯ ಮಕ್ಕಳ ರಕ್ಷಣಾ ಘಟಕ (ಯೂನಿಸೆಫ್ ಸಹಯೋಗದಲ್ಲಿ)

        ರಾಜ್ಯ ಮಕ್ಕಳ ರಕ್ಷಣಾ ಘಟಕವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಯೂನಿಸೆಫ್ ಹೈದರಾಬಾದ್ನ ಸಹಯೋಗದೊಂದಿಗೆ ರಾಜ್ಯದಲ್ಲಿ 2008-09ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಮಕ್ಕಳ ರಕ್ಷಣೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಹಕರಿಸುವ ಉದ್ದೇಶ ಹೊಂದಿರುತ್ತದೆ. ರಕ್ಷಣಾ ಯೋಜನೆಯ ಅನುಷ್ಠಾನದಲ್ಲಿ ಬೆಂಬಲ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ.

ಇತ್ತೀಚಿನ ನವೀಕರಣ​ : 24-07-2019 11:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಕ್ಕಳ ರಕ್ಷಣಾ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080