ಅಭಿಪ್ರಾಯ / ಸಲಹೆಗಳು

ಮಾಹಿತಿ ಶಿಕ್ಷಣ ಸಂವಹನ (ಐ ಇ ಸಿ)

ಮಾಹಿತಿ. ಶಿಕ್ಷಣ. ಸಂವಹನ (ಐ.ಇ.ಸಿ)

ಮಕ್ಕಳ ರಕ್ಷಣಾ ಯೋಜನೆಯಲ್ಲಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಆದ್ಯತಾ ಗುಂಪುಗಳನ್ನು ತಲುಪಲು ಮಾಹಿತಿಗಳು ಸೂಕ್ತ ಮಾಧ್ಯಮಗಳ ಮೂಲಕ ಪ್ರಚಾರಗೊಳ್ಳಬೇಕಾಗುತ್ತದೆ ಮತ್ತು ಉತ್ತಮ ರೀತಿಯಲ್ಲಿ ಸರಳ ಭಾಷೆಯಲ್ಲಿ ಸಂವಹನ ಮಾಡಬೇಕಾಗುತ್ತದೆ. ಇದಕ್ಕಾಗಿ ಸದರಿ ವರ್ಷದಲ್ಲಿ (ಐ.ಇ.ಸಿ) ಅಡಿಯಲ್ಲಿ  ಕೈಗೊಂಡ ಕಾರ್ಯಕ್ರಮಗಳು.

ಬಾಲಮಂದಿರ ಮಕ್ಕಳಿಗೆ ಚಿತ್ರಕಲಾ ಕಾರ್ಯಾಗಾರ:

          ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಅಡಿ ಜಿಲ್ಲೆಗಳಲ್ಲಿನ ಬಾಲಮಂದಿರದ ಮಕ್ಕಳಿಗೆ, ಮಕ್ಕಳಲ್ಲಿರುವ ಚಿತ್ರಕಲಾ  ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಮಕ್ಕಳಲ್ಲಿ ಚಿತ್ರಕಲೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವ ಸಲುವಾಗಿ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವಂತಹ ಮಕ್ಕಳಿಗೆ ಚಿತ್ರಕಲಾ ಪರಿಷತ್ ಸಹಯೋಗದೊಂದಿಗೆ ಕಾರ್ಯಾಗಾರವನ್ನು ದಿನಾಂಕ:04.09.2018 ಮತ್ತು 05.09.2018 ಹಾಗೂ ದಿನಾಂಕ:06.09.2018 ಮತ್ತು 07.09.2018 ರಂದು ಎರಡು ತಂಡಗಳಲ್ಲಿ ಚಿತ್ರಕಲಾ ಪರಿಷತ್ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. 27 ಜಿಲ್ಲೆಗಳಿಂದ 60 ಮಕ್ಕಳು ಚಿತ್ರಕಲಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕೆಲವು ಮಕ್ಕಳು ತುಮಕೂರು ಶಿವಮೊಗ್ಗ, ದಾವಣಗೆರೆ ಜಿಲ್ಲೆಯಿಂದ ಮುಂದಿನ ವಿದ್ಯಾಭ್ಯಾಸವನ್ನು ಚಿತ್ರಕಲೆಯಲ್ಲಿ ಮುಂದುವರೆಸಲು ಆಸಕ್ತಿ ತೋರಿದ್ದಾರೆ

.

 

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಪುಸ್ತಕ ಮುದ್ರಣ:

       ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ, ಮಕ್ಕಳ ರಕ್ಷಣೆಯನ್ನು ಅರ್ಥೈಸುವುದು, ಕಾನೂನು ಅನ್ವಯಿಸುವಿಕೆ, ಆಡಳಿತಾತ್ಮಕ ತತ್ವಗಳು ಹಾಗೂ ನಿಗದಿಪಡಿಸಿರುವ ಮಾನದಂಡಗಳು ಹಾಗೂ ಈ ನೀತಿಯನ್ನು ಅನುಷ್ಠಾನಗೊಳಿಸಿರುವುದರಿಂದ ಎದುರಿಸಬಹುದಾದ ಪ್ರಮುಖ ಸವಾಲುಗಳ ಬಗ್ಗೆ ಮಕ್ಕಳ ರಕ್ಷಣೆಗೆ ಪೂರಕವಾದ ಮಾನದಂಡಗಳ ಕುರಿತ ಮಾಹಿತಿಯನ್ನು ಈ ಪುಸ್ತಕದ ವಿವರಣೆಯಲ್ಲಿ ತಿಳಿಸಲಾಗಿದೆ. 

 

 

ರೋಲ್ ಆಫ್  ಜ್ಯುಡಿಶಿಯರಿ ಅಂಡ್ ಕೋರ್ಟ್ ಪ್ರೋಸಿಜರ್ ಫಾರ್ ಅಡಾಪ್ಷನ್ ಪುಸ್ತಕ ಮುದ್ರಣ:

        ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಕಾರ್ಯಕ್ರಮ. ಇಂತಹ ಮಕ್ಕಳಿಗೆ ಜೈವಿಕ ಪೋಷಕರನ್ನು ಒದಗಿಸಿಕೊಡುವುದರ ಮೂಲಕ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನುಬದ್ಧವಾಗಿ ಕಲ್ಪಿಸಲು ದತ್ತು ಕಾರ್ಯಕ್ರಮ ನೆರವಾಗುತ್ತಿದೆ. ದತ್ತು ಪ್ರಕ್ರಿಯೆಯು ಕಾನೂನು ಬದ್ಧವಾಗಿ ಮಾಡಿಕೊಳ್ಳುವಲ್ಲಿ ಅನುಸರಿಸಬಹುದಾದ ಕೋರ್ಟ್ನ ಪಾತ್ರವನ್ನು ಈ ಪುಸ್ತಕದ ವಿವರಣೆಯಲ್ಲಿ ನೀಡಲಾಗಿದೆ.