ಅಭಿಪ್ರಾಯ / ಸಲಹೆಗಳು

ತರಬೇತಿ

ತರಬೇತಿ

       ವೃತ್ತಿ ನಿರ್ವಹಣೆಯ ಎಲ್ಲಾ ಹಂತಗಳಲ್ಲೂ ಅಂದರೆ ಐಸಿಪಿಎಸ್ ಯೋಜನೆ/ಸೊಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ಆಡಳಿತವರ್ಗ ಹಾಗೂ ನೌಕರ ವರ್ಗದವರಲ್ಲಿ ತಮ್ಮ ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನು ಬಲವರ್ಧಿಸುವುದು.

 • ಐಸಿಪಿಎಸ್ ಅಡಿಯಲ್ಲಿ ರಾಜ್ಯಾದಂತ ಮಕ್ಕಳನ್ನು ರಕ್ಷಿಸುವ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ಸಿಬ್ಬಂದಿ ವರ್ಗದವರಿಗೆ ಆಧ್ಯತೆಯ ಮೇರೆಗೆ ಹಂತ-ಹಂತವಾಗಿ ತರಬೇತಿಗೊಳಿಸುವುದು ಹಾಗೂ ಅವರ ಸಾಮರ್ಥ್ಯ ಬಲವರ್ಧಿಸುವುದು.
 • ಮಕ್ಕಳನ್ನು ರಕ್ಷಿಸುವ ಕಾರ್ಯಪ್ರಕ್ರಿಯೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಅಗತ್ಯವಿರುವ ತರಬೇತಿ ನೀಡುವುದು ಹಾಗೂ ಮಕ್ಕಳ ರಕ್ಷಣಾ ಕಾರ್ಯದ ಎಲ್ಲಾ ಹಂತಗಳಲ್ಲೂ ಮಕ್ಕಳ ಸ್ನೇಹಿ ಸೇವೆಗಳನ್ನು ಒದಗಿಸುವಲ್ಲಿ ನಿರತರಾಗುವಂತೆ ಮಾಡುವುದು.

ಏಪ್ರಿಲ್ 2018 ರಿಂದ ಮಾರ್ಚ್ 2019ರ ಅಂತ್ಯಕ್ಕೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮಗಳು:

           ರಿಟ್ ಪಿಟೇಷನ್ ನಂ.102ರ 2007, ಮೇ 05, 2017ರಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಪ್ರತಿಯೊಂದು ಮಗುವಿಗೂ ವೈಯಕ್ತಿಕ ಪೋಷಣಾ ಯೋಜನೆ ಹಾಗೂ ಮಗುವಿನ ಸಾಮಾಜಿಕ ತನಿಖಾ ವರದಿಯನ್ನು ಮಾಡಬೇಕೆಂದು ತಿಳಿಸಿರುವುದರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಅಸಾಂಸ್ಥಿಕ ಮತ್ತು ಸಾಂಸ್ಥಿಕ), ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚಕರು ಹಾಗೂ ಆಪ್ತಸಮಾಲೋಚಕರು ತರಬೇತಿಯನ್ನು ಹಂತ ಹಂತವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಗಡಿ ರಸ್ತೆ, ಬೆಂಗಳೂರು ಮತ್ತು ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ನಿಮ್ಹಾನ್ಸ್, ಡಾ.ಎಂ.ಹೆಚ್. ಮರೀಗೌಡ ರಸ್ತೆ, ಬೆಂಗಳೂರು ಇಲ್ಲಿ ಅಧಿಕಾರಿಗಳಿಗೆ ತರಬೇತುದಾರರ ತರಬೇತಿಯನ್ನು ನೀಡಲಾಗಿರುತ್ತದೆ. ಒಟ್ಟಾರೆಯಾಗಿ 30 ಜಿಲ್ಲೆಗಳ 28 ಅಧಿಕಾರಿಗಳಿಗೆ TOT ಅನ್ನು ನೀಡಲಾಗಿರುತ್ತದೆ. ಹಾಗೂ 30 ಜಿಲ್ಲೆಗಳಿಂದ ಒಟ್ಟು 96 ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿ, ಸದರಿಯವರ ಜಿಲ್ಲಾ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 792 ಮಕ್ಕಳ ಪಾಲನಾ ಸಂಸ್ಥೆಗಳ ಒಟ್ಟು 1969 ಮುಖ್ಯಸ್ಥರು/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿ  ಮಾಹಿತಿ ನೀಡಲಾಗಿರುತ್ತದೆ.

 • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಎನ್.ಐ.ಸಿ ನವದೆಹಲಿ ಇವರ ಸಹಯೋಗದಡಿ Track the child portal ಎಂಬ ವೆಬ್ ಆಧಾರಿತ ತಂತ್ರಾಂಶವನ್ನು ಸಿದ್ದಪಡಿಸಿದೆ. ತಂತ್ರಾಂಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯವರಿಗೆ Track the child portal ಬಗ್ಗೆ 02 ತಂಡಗಳಲ್ಲಿ ಒಟ್ಟು 80 ಅಧಿಕಾರಿ/ಸಿಬ್ಬಂದಿಗಳಿಗೆ  ದಿನಾಂಕ:04.10.2018 ಮತ್ತು 05.10.2018ರಂದು ಸೆಂಟರ್ ಫಾರ್ ಇ-ಗವರ್ ನೆನ್ಸ್, ಬಹುಮಹಡಿ ಕಟ್ಟಡ, ಬೆಂಗಳೂರು ಇಲ್ಲಿ ತರಬೇತಿಯನ್ನು ನೀಡಲಾಗಿರುತ್ತದೆ. ಸದರಿ ತರಬೇತಿಯಲ್ಲಿ Track the child ಕುರಿತಂತೆ Hands on training website ನಲ್ಲಿ ಮಾಹಿತಿಯನ್ನು ಹೇಗೆ ಅಳವಡಿಸಬೇಕೆಂದು ತಿಳಿಸಲಾಯಿತು.

 • ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಲೆಕ್ಕಿಗರು, ಬಾಲಮಂದಿರಗಳ ಅಧೀಕ್ಷಕರುಗಳಿಗೆ ಸಾಮಾಗ್ರಿಗಳ ಖರೀದಿ ಪ್ರಕ್ರಿಯೆ ಹಾಗೂ ಕೆ.ಟಿ.ಪಿ.ಪಿ ಕಾಯ್ದೆ ಹಾಗೂ ನಿಯಮಗಳ ಕುರಿತು 02 ದಿನದ ತರಬೇತಿಯನ್ನು 02 ತಂಡಗಳಲ್ಲಿ ದಿನಾಂಕ:09.10.2018 ಮತ್ತು 10.10.2018 ಹಾಗೂ ದಿನಾಂಕ:11.10.2018 ಮತ್ತು 12.10.2018ರಂದು ಜಿಲ್ಲಾ ತರಬೇತಿ ಕೇಂದ್ರ, ಕೃಷಿ ಸಂಕೀರ್ಣ, ಬೆಂಗಳೂರು ಇಲ್ಲಿ ನೀಡಲಾಗಿರುತ್ತದೆ.

 • ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಾಧಿಕಾರಿಗಳಿಗೆ Tally ಕುರಿತು ಒಂದು ದಿನದ ತರಬೇತಿಯನ್ನು ದಿನಾಂಕ:30.08.2018ರಂದು ಸೆಂಟರ್ ಫಾರ್ ಇ-ಗವರ್ ನೆನ್ಸ್ ಬಹುಮಹಡಿ ಕಟ್ಟಡ, ಬೆಂಗಳೂರು ಇಲ್ಲಿ ತರಬೇತಿಯನ್ನು ನೀಡಲಾಗಿದೆ.
 • ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನೀಡಬೇಕಾದ ತರಬೇತಿಗಳಿಗೆ ಮಾಡ್ಯೂಲ್ ತಯಾರಿಕೆ ಕುರಿತಂತೆ ದಿನಾಂಕ:05.08.2018 ಮತ್ತು 06.08.2018ರಂದು ನಿರ್ದೇಶನಾಲಯ ಸಭಾಂಗಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಇಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

 • ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ:07.06.2018 ರಿಂದ 08.06.2018ರವರೆಗೆ ಹಮ್ಮಿಕೊಂಡಿದ್ದ Orientation ತರಬೇತಿ ಕಾರ್ಯಕ್ರಮಕ್ಕೆ ಒಟ್ಟು 14 ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸದಸ್ಯರುಗಳು ಹಾಜರಾಗಿದ್ದು, ಮಕ್ಕಳ ಮಾನಸಿಕ ಸ್ಥಿತಿ ಹಾಗೂ ಅವರೊಂದಿಗೆ ಯಾವ ರೀತಿ ಕೆಲಸ ಮಾಡಬೇಕು ಎಂಬುವುದರ ಬಗ್ಗೆ ತರಬೇತಿಯನ್ನು ನೀಡಲಾಗಿತ್ತು.
 • ಹೊಸದಾಗಿ ಆಯ್ಕೆಯಾಗಿರುವ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಬಾಲನ್ಯಾಯ ಮಂಡಳಿ ಸದಸ್ಯರುಗಳಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಒಟ್ಟು 200 ಜನಕ್ಕೆ ಒಂದು ದಿನದ ಪರಿಶೀಲನಾ ಕಾರ್ಯಾಗಾರವನ್ನು ದಿನಾಂಕ:27.06.2018 ರಂದು ವಿಕಾಸ ಸೌಧ ಕೊಠಡಿ ಸಂಖ್ಯೆ 419, ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
 • ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯಿಂದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಬಾಲನ್ಯಾಯ ಕಾಯ್ದೆ ಹಾಗೂ ದತ್ತು ಕುರಿತಂತೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಮುಂದುವರೆದು ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿಯನ್ನು ದಿನಾಂಕ:05.10.2018ರಂದು ಚನ್ನಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ತರಬೇತಿಯಲ್ಲಿ ಶ್ರೀಮತಿ ಶೈಲಜಾ, ಕಾರ್ಯಕ್ರಮ ವ್ಯವಸ್ಥಾಪಕರು SARA ಇವರು ವಿಷಯ ಮಂಡನೆ ಮಾಡಿ ಮಾಹಿತಿಯನ್ನು ನೀಡಿರುತ್ತಾರೆ.
 • ನಿಮ್ಹಾನ್ಸ್ ಸಂಸ್ಥೆಯವರು ಹಮ್ಮಿಕೊಂಡಿರುವ Pre Consultation on existing services and programs for the aftercare for children ageing out of child care institution ಸಮಾಲೋಚನಾ ತರಬೇತಿಯನ್ನು ದಿನಾಂಕ:06.04.2018ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಬಾಲಮಂದಿರಗಳ ಅಧೀಕ್ಷಕರು, ಪರಿವೀಕ್ಷಣಾಧಿಕಾರಿಗಳು ಸೇರಿದಂತೆ ಒಟ್ಟು 10 ಅಧಿಕಾರಿಗಳಿಗೆ ತರಬೇತಿಯನ್ನು ನಿಮ್ಹಾನ್ಸ್ ನಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.
 • ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯಿಂದ ಅಧಿಕಾರಿಗಳು/ಸಿಬ್ಬಂದಿಗಳು ಭಾಗವಹಿಸಿದ ಇತರೆ ತರಬೇತಿಗಳು:

ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಅಧಿಕಾರಿಗಳು/ಸಿಬ್ಬಂದಿಗಳಿಗೆ ಕೆಲವು ಇತರೆ ತರಬೇತಿಗಳಿಗೆ ಇತರೇ ಸಂಸ್ಥೆ (Administrative Training Institute and NIPCCD)ಗಳು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ವತಿಯಿಂದ ಹಮ್ಮಿಕೊಂಡಿರುವ ಕ್ರಮಗಳ ವಿವರ

ಕ್ರ.ಸಂ

ವಿಷಯ

ತರಬೇತಿ ದಿನಾಂಕ

ತರಬೇತಿ ಸಂಸ್ಥೆ ಮತ್ತು ಸ್ಥಳ

ಭಾಗವಹಿಸದವರು

ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿಗಳ ಸಂಖ್ಯೆ

1

ಸಂಸ್ಥೆಯಲ್ಲಿ ದಾಖಲಾದ ಪೋಷಕತ್ವದ ಮಕ್ಕಳ ಆರೈಕೆ ಹಾಗೂ ಕಾರ್ಯಕ್ರಮಗಳ ಸಮಾಲೋಚನೆ ಕಾರ್ಯಕ್ರಮ

06.04.2018

ಐಸಿಪಿಎಸ್ ನಿಮ್ಹಾನ್ಸ್

ಅಧೀಕ್ಷಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು

10

2

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

04.06.2018 05.06.2018

ಐಸಿಪಿಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

22

3

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

06.06.2018 07.06.2018

ಐಸಿಪಿಎಸ್ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

20

4

ಓರಿಯೆಂಟೇಷನ್ ತರಬೇತಿ

07.06.2018 08.06.2018

ಐಸಿಪಿಎಸ್ ನಿಮ್ಹಾನ್ಸ್

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು

14

5

ಸಮಾಲೋಚನಾ ಕಾರ್ಯಾಗಾರ

27.06.2018

ಐಸಿಪಿಎಸ್ ವಿಕಾಸ ಸೌಧ

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು

200

6

“ಪ್ರಕರಣ ನಿರ್ವಹಣೆ” ವೈಯಕ್ತಿಕ ಪೋಷಣಾ ವರದಿ ಹಾಗೂ ಸಾಮಾಜಿಕ ತನಿಖಾ ವರದಿಯ ಕುರಿತು

09.07.2018 11.07.2018

ಐಸಿಪಿಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

28

7

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

12.07.2018 13.07.2018

ಐಸಿಪಿಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

33

8

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

16.07.2018 17.07.2018

ಐಸಿಪಿಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

22

9

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

18.07.2018 19.07.2018

ಐಸಿಪಿಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

31

10

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

20.07.2018 21.07.2018

ಐಸಿಪಿಎಸ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

30

11

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

28.08.2018 29.08.2018

ಐಸಿಪಿಎಸ್, ನಿಮ್ಹಾನ್ಸ್

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

36

12

ಟ್ಯಾಲಿ

30.08.2018

ಐಸಿಪಿಎಸ್     ಇ-ಗವರ್ನೆನ್ಸ್, ಬಹುಮಹಡಿಗಳ ಕಟ್ಟಡ

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಾಧಿಕಾರಿಗಳು

30

13

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

30.08.2018 31.08.2018

ಐಸಿಪಿಎಸ್, ನಿಮ್ಹಾನ್ಸ್

ಸಮಾಲೋಚಕರು, ಸಮಾಜ ಕಾರ್ಯಕರ್ತರು, ಅಧೀಕ್ಷಕರು, ಸೋಷಿಯಲ್ ಕೇಸ್ ವರ್ಕರ್, ರಕ್ಷಣಾಧಿಕಾರಿಗಳು (ಸಾಂಸ್ಥಿಕ/ಅಸಾಂಸ್ಥಿಕ)

29

14

ಮಕ್ಕಳ ವೈಯಕ್ತಿಕ ಪೋಷಣಾ ವರದಿ ಸಿದ್ದಪಡಿಸುವುದರ ಬಗ್ಗೆ

-

ಎಲ್ಲಾ ಜಿಲ್ಲೆಗಳಲ್ಲಿ

ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರುಗಳು ಹಾಗೂ ಬಾಲಮಂದಿರಗಳ ಮುಖ್ಯಸ್ಥರುಗಳು

1969

15

ಟ್ರಾಕ್ ದಿ ಚೈಲ್ಡ್ ಪೋರ್ಟಲ್ ಹ್ಯಾಂಡ್ಸ್ ಆನ್ ತರಬೇತಿ

04.10.2018  05.10.2018

ಐಸಿಪಿಎಸ್ ಇ-ಗವರ್ನೆನ್ಸ್, ಬಹುಮಹಡಿಗಳ ಕಟ್ಟಡ

ಡಾಟಾ ಅನಾಲಿಸ್ಟ್, ರಕ್ಷಣಾಧಿಕಾರಿ(ಸಾಂಸ್ಥಿಕ/ಅಸಾಂಸ್ಥಿಕ), ಮಕ್ಕಳ ಕಲ್ಯಾಣ ಸಮಿತಿ ಮತ್ತು ಜೆಜೆಬಿ ಡಾಟಾ ಎಂಟ್ರಿ ಆಪರೇಟರ್ ಗಳು

80

16

ದತ್ತುವಿನ ಕಾರ್ಯಾಗಾರ

05.10.2018

ಪೊಲೀಸ್ ಇಲಾಖೆ, ರಾಮನಗರ

ಎಸ್.ಜೆ,ಪಿಯು ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು

80

17

ಕೆಟಿಪಿಪಿ ಕಾಯ್ದೆ

09.10.2018 10.10.2018

ಐಸಿಪಿಎಸ್, ಡಿಟಿಐ-ಬನಶಂಕರಿ

ಲೆಕ್ಕಾಧಿಕಾರಿ/ಅಧೀಕ್ಷಕರು, ಬಾಲಮಂದಿರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಾಧಿಕಾರಿಗಳು

58

18

ಕೆಟಿಪಿಪಿ ಕಾಯ್ದೆ

11.10.2018 12.10.2018

ಐಸಿಪಿಎಸ್, ಡಿಟಿಐ-ಬನಶಂಕರಿ

ಲೆಕ್ಕಾಧಿಕಾರಿ/ಅಧೀಕ್ಷಕರು, ಬಾಲಮಂದಿರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಾಧಿಕಾರಿಗಳು

60

19

ಮಕ್ಕಳ ರಕ್ಷಣೆ ತೊಂದರೆಗಳು ಮತ್ತು ಸಲಹೆ ಕ್ರಮಗಳ ಕುರಿತು

15.11.2018 16.11.2018

ಆಡಳಿತ ತರಬೇತಿ ಕೇಂದ್ರ, ಮೈಸೂರು

ಬಾಲಮಂದಿರದ ಅಧೀಕ್ಷಕರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು

12

20

Colloquium on changing laws and their implications children ಕುರಿತಂತೆ ಕಾರ್ಯಕ್ರಮವನ್ನು ಮಕ್ಕಳ ಸಹಾಯವಾಣಿಯ ಸಹಯೋಗದೊಂದಿಗೆ

27.12.2018

ವಿಜಯ ರೆಸಿಡೆನ್ಸಿ ಬೆಂಗಳೂರು

ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ವಿವಿಧ ಪಾಲುದಾರರು (ಪೊಲೀಸ್, ಆರೋಗ್ಯ, ಶಿಕ್ಷಣ, ಕಾರ್ಮಿಕ ಇತರೇ ಇಲಾಖೆ ಹಾಗೂ ಸಂಸ್ಥೆಗಳು)

163

21

Basic Psychosocial care for children in difficult circumstances ತರಬೇತಿ

21.01.2019 23.01.2019

ಐಸಿಪಿಎಸ್, ನಿಮ್ಹಾನ್ಸ್

ಬಾಲಮಂದಿರಗಳ ಹಾಗೂ ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕರು ಮತ್ತು ಆಪ್ತ ಸಮಾಲೋಚಕರು

29

22

Basic Psychosocial care for children in difficult circumstances ತರಬೇತಿ

29.01.2019 31.01.2019

ಐಸಿಪಿಎಸ್, ನಿಮ್ಹಾನ್ಸ್

ಬಾಲಮಂದಿರಗಳ ಹಾಗೂ ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕರು ಮತ್ತು ಆಪ್ತ ಸಮಾಲೋಚಕರು

31

23

ಸಮಾಲೋಚನಾ ಸಭೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಹಯೋಗದೊಂದಿಗೆ

30.01.2019

ವಿಕಾಸಸೌಧ

ಅಧ್ಯಕ್ಷರು/ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು

63

24

ಮಕ್ಕಳ ಪಾಲನಾ ಸಂಸ್ಥೆ ಕಾರ್ಯನಿರ್ವಹಣೆಯ ಕುರಿತು ಕಾರ್ಯಾಗಾರ

12.02.2019

ಐಸಿಪಿಎಸ್, ನಿರ್ದೇಶಕರ ನಿರ್ದೇಶನಾಲಯ

ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳು

25

25

ಕರ್ನಾಟಕ ರಾಜ್ಯದಲ್ಲಿ ಪೋಷಕತ್ವ ಅನುಷ್ಠಾನ ಕುರಿತು ವಿಡಿಯೋ ಕಾನ್ಫರೆನ್ಸ್

13.02.2019

ಐಸಿಪಿಎಸ್, ನಿರ್ದೇಶಕರ ನಿರ್ದೇಶನಾಲಯ

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ರಕ್ಷಣಾಧಿಕಾರಿಗಳು

13

26

ಓರಿಯೆಂಟೇಷನ್ ತರಬೇತಿ

25.02.2019 27.02.2019

ಐಸಿಪಿಎಸ್, ನಿಮ್ಹಾನ್ಸ್

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು

27

27

ಕರೆಂಟ್ ಆಫ್ಟರ್ ಕೇರ್

ಪ್ರಾಕ್ಟೀಸಸ್ ಕಾರ್ಯಕ್ರಮವನ್ನು ನಿಮ್ಹಾನ್ಸ್ ಸಹಯೋಗದೊಂದಿಗೆ

27.02.2019

ಐಸಿಪಿಎಸ್, ನಿಮ್ಹಾನ್ಸ್

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು

08

28

ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಬಚ್ಪಾನ್ ಬಚಾವೊ ಆಂದೋಲಾನ್ ರವರ ಸಹಯೋಗದೊಂದಿಗೆ

07.03.2019

ಭಾರತೀಯ ಸಾಮಾಜಿಕ ಸಂಸ್ಥೆ, ಬೆಂಗಳೂರು

ಅಧ್ಯಕ್ಷರು/ ಸದಸ್ಯರುಗಳು ಮಕ್ಕಳ ಕಲ್ಯಾಣ ಸಮಿತಿ ಮತ್ತು ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ

60

29

Basic Psychosocial care for children in difficult circumstances ತರಬೇತಿ

07.03.2019 09.03.2019

ಐಸಿಪಿಎಸ್, ನಿಮ್ಹಾನ್ಸ್

ಬಾಲಮಂದಿರಗಳ ಹಾಗೂ ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕರು ಮತ್ತು ಆಪ್ತ ಸಮಾಲೋಚಕರು

29

30

ಸಮಾಲೋಚನಾ ಸಭೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಹಯೋಗದೊಂದಿಗೆ

12.03.2019

ವಿಕಾಸಸೌಧ

ಸದಸ್ಯರು ಬಾಲನ್ಯಾಯ ಮಂಡಳಿ ಹಾಗೂ ವೀಕ್ಷಣಾಲಯದ ಅಧೀಕ್ಷಕರುಗಳು ಮತ್ತು ಬಾಲನ್ಯಾಯ ಮಂಡಳಿ ಪರಿವೀಕ್ಷಣಾಧಿಕಾರಿಗಳು

105

31

ಓರಿಯೆಂಟೇಷನ್ ತರಬೇತಿ

11.03.2019 13.03.2019

ಐಸಿಪಿಎಸ್, ನಿಮ್ಹಾನ್ಸ್

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು

32

32

ಓರಿಯೆಂಟೇಷನ್ ತರಬೇತಿ

18.03.2019 20.03.2019

ಐಸಿಪಿಎಸ್, ನಿಮ್ಹಾನ್ಸ್

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು

43

33

Basic Psychosocial care for children in difficult circumstances ತರಬೇತಿ

26.03.2019 28.03.2019

ಐಸಿಪಿಎಸ್, ನಿಮ್ಹಾನ್ಸ್

ಬಾಲಮಂದಿರಗಳ ಹಾಗೂ ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕರು ಮತ್ತು ಆಪ್ತ ಸಮಾಲೋಚಕರು

20

ಒಟ್ಟು

3412

NIPCCD ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮಗಳ ವಿವರ

ಕ್ರ.ಸಂ

ವಿಷಯ

ತರಬೇತಿ ದಿನಾಂಕ

ತರಬೇತಿ ಸಂಸ್ಥೆ/ಸ್ಥಳ

ಭಾಗವಹಿಸಿದವರು

ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿಗಳ ಸಂಖ್ಯೆ

1

ಜೆ-ಜೆ- ಸಿಸ್ಟಮ್ ಹಾಗೂ ಐಸಿಪಿಎಸ್ ವಿವಿಧ ನಿಬಂಧನೆಗಳ ಕುರಿತು ತರಬೇತಿದಾರರ ತರಬೇತಿ

21.05.2018 01.06.2018

ನಿಪ್ಸಿಡ್ ಯಲಹಂಕ

ರಕ್ಷಣಾಧಿಕಾರಿ (ಅಸಾಸಂಸ್ಥಿಕ) ಮತ್ತು LPO

10

2

ಓರಿಯೆಂಟೇಷನ್ ತರಬೇತಿ ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆ ಕುರಿತು

18.06.2018 22.06.2018

ನಿಪ್ಸಿಡ್ ಯಲಹಂಕ

ಅಧೀಕ್ಷಕರು ಹಾಗೂ ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರುಗಳು

10

3

ಮಕ್ಕಳ ರಕ್ಷಣೆ ಕುರಿತು ತರಬೇತಿದಾರರ ತರಬೇತಿ

02.07.2018 13.07.2018

ನಿಪ್ಸಿಡ್ ಯಲಹಂಕ

ರಕ್ಷಣಾಧಿಕಾರಿ (ಅಸಾಂಸ್ಥಿಕ&ಸಾಂಸ್ಥಿಕ)

10

4

ಓರಿಯೆಂಟೇಷನ್ ತರಬೇತಿ ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರುಗಳಿಗೆ

25.07.2018 27.07.2018

ನಿಪ್ಸಿಡ್ ಯಲಹಂಕ

ಬಾಲಮಂದಿರಗಳ ಅಧೀಕ್ಷಕರುಗಳು

10

5

ಓರಿಯೆಂಟೇಷನ್ ತರಬೇತಿ ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರುಗಳಿಗೆ

01.08.2018 03.08.2018

ನಿಪ್ಸಿಡ್ ಯಲಹಂಕ

ಬಾಲಮಂದಿರಗಳ ಅಧೀಕ್ಷಕರುಗಳು

10

6

ಓರಿಯೆಂಟೇಷನ್ ತರಬೇತಿ ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆ ಕುರಿತು

27.08.2018 31.08.2018

ನಿಪ್ಸಿಡ್ ಯಲಹಂಕ

ಬಾಲಮಂದಿರಗಳ ಅಧೀಕ್ಷಕರುಗಳು

10

7

ಮಕ್ಕಳ ಜೊತೆ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರು ಹಾಗೂ ಆಪ್ತಸಮಾಲೋಚಕರಿಗೆ ಓರಿಯೆಂಟೇಷನ್ ತರಬೇತಿ

24.09.2018 26.09.2018

ನಿಪ್ಸಿಡ್ ಯಲಹಂಕ

ಸಮಾಜ ಕಾರ್ಯಕರ್ತರು & ಆಪ್ತಸಮಾಲೋಚಕರುಗಳು

10

8

ಓರಿಯೆಂಟೇಷನ್ ತರಬೇತಿ ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರುಗಳಿಗೆ

03.12.2018 07.12.2018

ನಿಪ್ಸಿಡ್ ಯಲಹಂಕ

ಅಧೀಕ್ಷಕರು ಮತ್ತು ಆಪ್ತಸಮಾಲೋಚಕರುಗಳು

10

9

ಬಾಲನ್ಯಾಯ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕುರಿತಂತೆ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕಾರ್ಯಾಗಾರ

10.01.2019 11.01.2019

ನಿಪ್ಸಿಡ್ ನವದೆಹಲಿ

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು

10

10

ಬಾಲನ್ಯಾಯ ಮಂಡಳಿ ಸದಸ್ಯರುಗಳಿಗೆ ಓರಿಯೆಂಟೇಷನ್ ತರಬೇತಿ

14.02.2019 15.02.2019

ನಿಪ್ಸಿಡ್

ಬಾಲನ್ಯಾಯ ಮಂಡಳಿ ಸದಸ್ಯರು

10

11

ಮಕ್ಕಳ ರಕ್ಷಣೆ ಕುರಿತು ವಿಭಾಗೀಯ ಮಟ್ಟದ ಐಸಿಪಿಎಸ್ ಪಾಲುದಾರರಿಗೆ ತರಬೇತಿ

20.02.2019 21.02.2019

ನಿಪ್ಸಿಡ್ ಯಲಹಂಕ

ಎಸ್.ಸಿ.ಪಿ.ಎಸ್ ನ ಹಿರಿಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು/ಸದಸ್ಯರು, ಸಿಸಿಐನ ಬಾಲನ್ಯಾಯ ಮಂಡಳಿ ಸದಸ್ಯರು

10

12

ಮಕ್ಕಳ ಹಕ್ಕು ಹಾಗೂ ರಕ್ಷಣೆ ಕುರಿತಂತೆ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಓರಿಯೆಂಟೇಷನ್ ತರಬೇತಿ

19.02.2019 22.02.2019

ನಿಪ್ಸಿಡ್ ಯಲಹಂಕ

ಅಧೀಕ್ಷಕರು,

 ಕೇಸ್ ವರ್ಕರ್, ಪರಿವೀಕ್ಷಣಾಧಿಕಾರಿಗಳು, ಕಲ್ಯಾಣಧಿಕಾರಿ, ಸಂಯೋಜಕರು

10

13

ಮಕ್ಕಳ ರಕ್ಷಣೆ ಕುರಿತು ವಿಭಾಗೀಯ ಮಟ್ಟದ ಐಸಿಪಿಎಸ್ ಪಾಲುದಾರರಿಗೆ ತರಬೇತಿ

28.02.2019 01.03.2019

ನಿಪ್ಸಿಡ್ ಯಲಹಂಕ

ಎಸ್.ಸಿ.ಪಿ.ಎಸ್ ನ ಹಿರಿಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು/ಸದಸ್ಯರು, ಸಿಸಿಐನ ಬಾಲನ್ಯಾಯ ಮಂಡಳಿ ಸದಸ್ಯರುಗಳು

10

14

ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರುಗಳಿಗೆ ಓರಿಯೆಂಟೇಷನ್ ತರಬೇತಿ

11.03.2019 13.03.2019

ನಿಪ್ಸಿಡ್ ಯಲಹಂಕ

ಬಾಲಮಂದಿರಗಳ ಅಧೀಕ್ಷಕರುಗಳು

15

15

ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರು ಹಾಗೂ ಆಪ್ತಸಮಾಲೋಚಕರಿಗೆ ಓರಿಯೆಂಟೇಷನ್ ತರಬೇತಿ

19.03.2019 21.03.2019

ನಿಪ್ಸಿಡ್ ಯಲಹಂಕ

ಸಮಾಜ ಕಾರ್ಯಕರ್ತರು &

ಆಪ್ತಸಮಾಲೋಚಕರುಗಳು

10

ಒಟ್ಟು

155

ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮದ ಕಾರ್ಯಕ್ರಮದ ಘೋಷವಾರು

ಐಸಿಪಿಎಸ್ ವತಿಯಿಂದ ಹಮ್ಮಿಕೊಂಡಿರುವ ಒಟ್ಟು ತರಬೇತಿಗಳು

ಭಾಗವಹಿಸಿದವರ ಒಟ್ಟು ಸಂಖ್ಯೆ

NIPCCD ವತಿಯಿಂದ ಹಮ್ಮಿಕೊಂಡಿರುವ ಒಟ್ಟು ತರಬೇತಿಗಳು

ಭಾಗವಹಿಸಿದವರ ಒಟ್ಟು ಸಂಖ್ಯೆ

ಒಟ್ಟು ತರಬೇತಿಗಳು

ಭಾಗವಹಿಸಿದವರ ಒಟ್ಟು ಸಂಖ್ಯೆ

33

3412

15

155

48

3567

ಇತ್ತೀಚಿನ ನವೀಕರಣ​ : 20-07-2019 05:15 PM ಅನುಮೋದಕರು: approverಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಕ್ಕಳ ರಕ್ಷಣಾ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080